18 November 2009

ಸಂಶೋಧನಾ ಮನೋಭಾವ

ಪೀಟಿಕೆ
ಸಂಶೋಧನಾ ಮನೋಭಾವ ಎಂಬ ಈ ಲೇಖನ ಸರಣಿಯು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ, ಸಂಶೋಧಕರಿಗೆ ಉಪಯೋಗವಾಗುವಂತೆ ಇದನ್ನು ರೂಪಿಸಿ ಬರೆಯಲಾಗಿದೆ.  ಇದನ್ನು ಸಂಶೋಧನಾ ಕ್ಷೇತ್ರದಲ್ಲಿರುವವರು ಮತ್ತು ಮುಂದೆ ಸಂಶೋಧನೆ ನಡೆಸಲು ಆಸೆ ಇರುವವರು ಕೂಲಂಕುಶವಾಗಿ ಅರಿತು ಅಳವಡಿಸಿಕೊಂಡಲ್ಲಿ ಭವಿಷ್ಯದ ಸಂಶೋಧನಾ ದಿನಗಳು ಸುವರ್ಣ ಯುಗವಾಗಿ ಪರಿವರ್ತಿತಗೊಳ್ಳುತ್ತದೆ ಎಂದು ನಂಬಿರುತ್ತೇನೆ.


ಸಂಶೋಧನೆ ಎಂದರೆ ಏನು?
ಸಂಶೋಧನಾ ಮನೋಭಾವನೆಯ ದೃಷ್ಟಿ ಹೇಗಿರುತ್ತದೆ ಮತ್ತು ಅದು ನಿಮ್ಮ ಕೆಲಸದಲ್ಲಿ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಮೊದಲು ಮುಖ್ಯವಾಗಿ ತಿಳಿದು ಕೊಳ್ಳಬೇಕಾಗಿರುವುದು ಸಂಶೋಧನೆ ಎಂದರೆ ನಿಜವಾಗಿಯೂ ಏನು ಎಂದು.
ಸಂಶೋಧನೆಯನ್ನು ವಿಸ್ತಾರವಾಗಿ ವಿಂಗಡಿಸಿದರೆ, ಅದು ಜ್ಞಾನಕ್ಕೆ ಎಡೆ ಮಾಡಿಕೊಡುವ ಒಂದು ಶಿಸ್ತುಬದ್ಧ ವಿಚಾರಣೆ ಎಂದು ಹೇಳಬಹುದು.  ಸಂಶೋಧನೆಯನ್ನು ಹಲವಾರು ರೀತಿಯಲ್ಲಿ ವಿಶ್ಲೇಷಣೆ, ವಿಂಗಡಣೆ ಅಥವಾ ಪ್ರಭೇದನೆ ಮಾಡಬಹುದು, ಉದಾ:- ಶಿಕ್ಷಣ ಕ್ಷೇತ್ರ, ಮಾಹಿತಿ ಸಂಗ್ರಹಣೆಯ ವಿಧಾನ ಅಥವ ಉದ್ದೇಶ.  ಬಹುತೇಕವಾಗಿ ಸಂಶೋಧನೆಯನ್ನು ಶುದ್ಧ ಸಂಶೋಧನೆ, ಅಥವ ಶೈಕ್ಷಣಿಕ ಸಂಶೋಧನೆ ಮತ್ತು ವತ್ತು ನೀಡಿದ ಸಂಶೋಧನೆ ಎಂದು ವಿಂಗಡಿಸಬಹುದು ಮತ್ತು ಇದೆಲ್ಲದರ ನಡುವಿನ ಸಂಬಂಧವನ್ನು ಸಂಶೋಧನೆ, ಅಭ್ಯಾಸ ಮತ್ತು ಸಿದ್ಧಾಂತ ವೃದ್ಧಿ ಇವು ಒಂದು ರೀತಿ ಕ್ರಿಯಾಶೀಲವಾಗಿ ಮಾಡುತ್ತದೆ.  ಸಂಶೋಧನೆಯು ಅನುದಿನವು ಪ್ರಪಂಚದಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದ ಪ್ರೇರಿತಗೊಳ್ಳುತ್ತಿದೆ.  ಇಂದಿನ ಚರ್ಚೆಯು ಸಂಶೋಧನೆಯ ಲಕ್ಷಣ ಮತ್ತು ಉದ್ದೇಶವನ್ನು ಅವಲಂಬಿಸಿ, ಅದರ ಕೊಡುಗೆಯ ಬಗ್ಗೆ ಹೆಚ್ಚಿನ ಮಹತ್ವ ನೀಡುವ ನಿಟ್ಟಿನಲ್ಲಿ ಅದರ ಬಹುಮುಖಿತ್ವವನ್ನು ಗುರುತಿಸುತ್ತಿದೆ. ಸಂಶೋಧನೆ ಅಥವ ಸಂಶೋಧನೆಗೆ ಸಂಬಂಧಿಸಿದ ಕೆಲವು ಚಟುವಟಿಕೆಗಳು ಈ ಕೆಳಕಂಡಂತೆ ಇವೆ:
೧. ಮೌಲ್ಯಮಾಪನಾ ಸಂಶೋಧನೆ
೨. ಕ್ರುತ್ಯಾದಾರಿತ ಸಂಶೋಧನೆ
೩. ಕ್ಷಿಪ್ರ ಬೆಳವಣಿಗೆಯ ನಿಷ್ಕರ್ಷೆ
೪. ವಿಷಯ ಅಧ್ಯಯನ ಸಂಶೋಧನೆ
೫. ಪ್ರಯೋಗಾತ್ಮಕ ಸಂಶೋಧನೆ
೬. ಶಿಸ್ತುಬದ್ಧ ಪರಾಮರ್ಶೆ
೭. ಪರಿಮಾಣ ಸಂಬಂಧಿ ಸಂಶೋಧನೆ
೮. ಗುಣಾತ್ಮಕ ಸಂಶೋಧನೆ
೯. ವೈಜ್ಞಾನಿಕ ಸಂಶೋಧನೆ
೧೦. ಕ್ಷೇತ್ರ ಅಧ್ಯಯನ


ಇದರ ಜೊತೆಯಲ್ಲಿ ಸಾಮಾನ್ಯ ಸಂಶೋಧನಾ ಚಾತುರ್ಯತೆ ಮತ್ತು ಸೂತ್ರಗಳನ್ನು ಆಧರಿಸಿ ಒಂದು ಉತ್ತಮ ಸಂಶೋಧನೆಗೆ ಬೇಕಾಗುವ ಲಕ್ಷಣಗಳು:
೧. ಶಿಸ್ತು
೨. ಉದ್ದೇಶ
೩. ಸಂಯೋಜನೆ
೪. ವಿಮರ್ಷಣೆ
೫. ವಿಭಜನಾತ್ಮಕ ವಿಧಾನ
೬. ಸಿದ್ದಾಂತಗಳನ್ನು ಸಮರ್ಥವಾಗಿ ತಿಳಿಸುವ ಕಾರ್ಯಕ್ಷಮತೆ
೭. ವಿಶ್ವಾಸಾತ್ಮಕವಾಗಿ ಸಮರ್ಥಿಸುವಿಕೆ.


ದಿನದ ಕೊನೆಗೆ ಎಲ್ಲ ಸಂಶೋಧನೆಯು ಒಂದು ರೀತಿಯ ವಿಚಾರಣೆ.  ಸಂಶೋಧನಾ ನಿರ್ಣಯಗಳು ಜ್ಞಾನದ ಬೆಳವಣಿಗೆಗೆ, ಗ್ರಹಿಕೆಗೆ ಅಥವ ಹೊಸದೊಂದನ್ನು ಪತ್ತೆಹಚ್ಚಲು ಅನುಕೂಲ ಮಾಡಿಕೊಡುತ್ತದೆ. 

ಸಂಶೋಧನಾ ಮನೋಭಾವನೆಯ ಅರ್ಥ
ಮುಂದಿನ ಸಂಚಿಕೆಯಲ್ಲಿ ....................... 

4 comments:

  1. It shows your experience in research in a short time and you are fully into it. Thanks for giving us a nice article about research.

    ReplyDelete
  2. Santosh, good observations and anlaysis.
    ಪದ ಬಳಕೆಯಲ್ಲಿ ಇಂಗ್ಲೀಷನ್ನೂ ಬಳಸಿ ಸಮಾನಾರ್ಥ ಶಬ್ದದ ಮೂಲಕ ಹೇಳಬಹುದು ನೀವು ವಿಷಯವನ್ನು...ಇದರಿಂದ ನಿಧಾನವಾಗಿ ಶಬ್ದಗಳ ಕನ್ನಡೀಕರಣ ಸಾಧ್ಯ...
    ಚನ್ನಾಗಿದೆ ವಿಷಯ ಪ್ರಸ್ತಾವನೆ.

    ReplyDelete
  3. very good illustrations with simple langauage

    ReplyDelete