08 March 2012

ಬಣ್ಣದ ಚಿಟ್ಟೆ

ಬಣ್ಣದ ಚಿಟ್ಟೆ ಬಣ್ಣದ ಚಿಟ್ಟೆ
ಬೇಲಿಯ ಹಾರುತ್ತಿತ್ತು
ಬಟ್ಟೆಯ ತೊಟ್ಟು ಬಾಗಿನ ಹೊತ್ತು
ಬಾನಿಗೆ ಏರುತ್ತಿತ್ತು

ಮಧುವನು ಹೀರಿ ಮೆಲ್ಲನೆ ಹಾಡಿ
ಮೋಡಕ್ಕೆ ಹೇಳುತ್ತಿತ್ತು
ನೀರನು ಹೀರಿ ಜೇನನು ಚೆಲ್ಲಿ
ಸಿಹಿಯ ಹಂಚಿತ್ತು

ಹಸಿರನು ಹಾಸಿ ಹೂಮಳೆ ಚೆಲ್ಲಿ
ಹರುಷವ ತಂದಿತ್ತು
ಎಲ್ಲಡೆ ಸುಗ್ಗಿ ಏಕತೆ ತನ್ನಿ
ಎನ್ನುತ ಕರೆದಿತ್ತು

ಭೇದವ ಬಿಟ್ಟು ಭಾವನೆ ತಂದು
ಭೂಮಿಯ ಸುತ್ತಿತ್ತು
ಸುಖವನು ನೀಡಿ ಶಾಂತಿಯ ಕೋರಿ
ಸ್ವರ್ಗವ ತೆರೆದಿತ್ತು 

8 comments:

  1. Tumba dinada nantra.....good friend.....munduvariyali aavishkaara....

    ReplyDelete
  2. ಒಳ್ಳೆ ಕವನ. ತುಂಬ ದಿವ್ಸ ಆಗಿತ್ತು ನಿನ್ ಪದ್ಯ ಓದಿ. ಕವನದಲ್ಲಿ ಇರೋ ಸಂದೇಶ ಚೆನ್ನಾಗಿ ವ್ಯಕ್ತವಾಗಿದೆ.

    ReplyDelete
  3. 1st and 2nd stanzas are not linking with 3rd and 4th, once see.

    ReplyDelete
  4. Nagaraj,

    Thank you. Your words of encouragement will keep me going.

    ReplyDelete
  5. Pavithra,

    Thank you for the comment. I would recommend you to read the poem once again and try to know the message behind it. I hope you will understand.

    ReplyDelete